ತುಮಕೂರು: ಪಿಯು ಪರೀಕ್ಷಾ ಕೇಂದ್ರಗಳು ಸಂಪೂರ್ಣ ಸ್ಯಾನಿಟೈಸ್ - ಪಿಯುಸಿ ಪರೀಕ್ಷಾ ಕೇಂದ್ರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7642780-1017-7642780-1592319678788.jpg)
ತುಮಕೂರು: ಜೂನ್ 18 ರಂದು ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳಲ್ಲಿರೋ ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಕುಳಿತು ಪರೀಕ್ಷೆ ಬರೆಯುವ ಡೆಸ್ಕ್ಗಳು, ಕೊಠಡಿಯ ಗೋಡೆಗಳು, ಪರೀಕ್ಷಾ ಕೇಂದ್ರದ ಒಳ ಆವರಣ, ಹೊರ ಆವರಣದಲ್ಲಿ ಔಷಧಿ ಸಿಂಪಡಣೆ ಮಾಡಲಾಗಿದೆ. ಸ್ಥಳೀಯ ಪೌರಸಂಸ್ಥೆ ಸಿಬ್ಬಂದಿಯನ್ನು ಬಳಸಿಕೊಂಡು ಶಿಕ್ಷಣ ಇಲಾಖೆ ಸಿಬ್ಬಂದಿ ಸಲಹೆ ಮೇರೆಗೆ ಜಿಲ್ಲೆಯಲ್ಲಿರೋ ಒಟ್ಟು 34 ಪರೀಕ್ಷಾ ಕೇಂದ್ರದಲ್ಲಿಯೂ ಸ್ಯಾನಿಟೈಸ್ ಮಾಡಲಾಯಿತು.