ಮೈಸೂರು ಅರಮನೆಯಲ್ಲಿ ಶ್ರೀಗಂಧದ ಮ್ಯೂಸಿಯಂ ನಿರ್ಮಾಣ: ಸಚಿವ ಸೋಮಶೇಖರ್
🎬 Watch Now: Feature Video
ಮೈಸೂರು: ನಗರದ ಅರಮನೆಯಲ್ಲಿ ಶ್ರೀಗಂಧದ ಮ್ಯೂಸಿಯಂ ಮಾಡುವ ಬಗ್ಗೆ ಚಿಂತನೆ ನಡೆಸಿದ್ದು, ಅದಕ್ಕಾಗಿ ಅರಮನೆಯಲ್ಲಿ ಸ್ಥಳ ನೀಡಬೇಕೆಂದು ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದೇವೆ. ಅರಣ್ಯ ಭವನದ ಒಳಗೆ ಶ್ರೀಗಂಧದ ಮ್ಯೂಸಿಯಂ ಮಾಡುವ ಬಗ್ಗೆ ಮೊದಲು ಪ್ಲಾನ್ ಮಾಡಲಾಗಿತ್ತು. ಆದರೆ ಮೈಸೂರು ಅರಮನೆಗೆ ಹೆಚ್ಚು ಪ್ರವಾಸಿಗರು ಆಗಮಿಸುವ ಕಾರಣದಿಂದಾಗಿ ಅಲ್ಲಿಯೇ ಮ್ಯೂಸಿಯಂ ಮಾಡಿದರೆ ಒಳಿತು. ಅರಮನೆ ನೋಡಲು ಬರುವ ಜನರಿಗೆ ಶ್ರೀಗಂಧದ ವೈಶಿಷ್ಟ್ಯತೆ ಬಗ್ಗೆ ತಿಳಿಸಲು ಹಾಗೂ ರೈತರಿಗೆ ಈ ಬಗ್ಗೆ ಮಾಹಿತಿ ನೀಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಅಂಬಾವಿಲಾಸ ಅರಮನೆ ಆವರಣದಲ್ಲಿ ಶ್ರೀಗಂಧದ ಮ್ಯೂಸಿಯಂ ಮಾಡಲು ತೀರ್ಮಾನಿಸಿದ್ದೇವೆ ಎಂದು ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು.