ಬಾಳೆಹಣ್ಣನ್ನು ಗಬಗಬನೆ ತಿಂದರು: ಗುಂಡು ಎತ್ತಲು ಪರದಾಡಿದರು - ಗುಂಡು ಎತ್ತುವ ಸ್ಪರ್ಧೆ
🎬 Watch Now: Feature Video
ಮೈಸೂರು: ವರುಣಾ ಗ್ರಾಮದಲ್ಲಿ ಏರ್ಪಡಿಸಿದ್ದ ಗ್ರಾಮೀಣ ದಸರಾ ಕ್ರೀಡಾಕೂಟದಲ್ಲಿ ಬಾಳೆ ಹಣ್ಣು ತಿನ್ನುವ ಹಾಗೂ ಗುಂಡು ಎತ್ತುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಒಂದು ಕೆ.ಜಿ.ಬಾಳೆ ಹಣ್ಣಿನಲ್ಲಿ ನಿಗಧಿತ ಎರಡು ನಿಮಿಷದಲ್ಲಿ ಯಾರು ಜಾಸ್ತಿ ಬಾಳೆಹಣ್ಣನ್ನು ತಿಂದು ವಿಜೇತರಾಗುತ್ತಾರೋ, ಅವರಿಗೆ ಬಹುಮಾನ ನೀಡಲಾಗುತ್ತದೆ. ಈ ಸ್ಫರ್ಧೆಗೆ ಕುಳಿತ 20 ಮಂದಿಯಲ್ಲಿ ಹೆಚ್ಚು ಬಾಳೆ ಹಣ್ಣು ತಿಂದ ರುಕ್ಮಿಣಿ ಮೊದಲಿಗರಾದರು. ಇನ್ನು ಗುಂಡು ಎತ್ತುವ ಸ್ಫರ್ಧೆಯಲ್ಲಿ ಬಹಳಷ್ಟು ಮಂದಿ ಶಕ್ತಿ ಪ್ರದರ್ಶನ ತೋರಿಸಿದರು. ಇದರಲ್ಲಿ ಅವಿನಾಶ ಎಂಬುವರಿಗೆ ಪ್ರಶಸ್ತಿ ಲಭಿಸಿತು.