ದರ್ಶನ್ ಅಭಿಮಾನಿಗಳ ಕ್ರೇಜ್... ಕಾರುಗಳ ಮೇಲೆ ರಾರಾಜಿಸುತ್ತಿದ್ದಾನೆ 'ರಾಬರ್ಟ್' - ದರ್ಶನ್ ಅಭಿನಯದ ರಾಬರ್ಟ್
🎬 Watch Now: Feature Video
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಸದ್ಯ ಹೈ ವೋಲ್ಟೇಜ್ ಕ್ರಿಯೇಟ್ ಮಾಡಿರುವ ಚಿತ್ರ ಅಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್'. ಈ ಚಿತ್ರದ ಪೋಸ್ಟರ್ ಹಾಗೂ ಟೀಸರ್ ನೋಡಿದ ದಚ್ಚು ಫ್ಯಾನ್ಸ್ ಸಿನಿಮಾ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಚಿತ್ರದ ಕ್ರೇಜ್ ಯಾವ ಮಟ್ಟಕ್ಕೆ ಇದೆ ಅಂದ್ರೆ. ದರ್ಶನ್ ಬರ್ತ್ಡೇ ಸಮಯದಲ್ಲಿ ಅಭಿಮಾನಿಯೊಬ್ಬ ರಾಬರ್ಟ್ ಅವತಾರವನ್ನು ಬೆನ್ನ ತುಂಬಾ ಟ್ಯಾಟೂ ಹಾಕಿಸಿಕೊಂಡಿದ್ದ. ಈಗ ಅಭಿಮಾನಿಗಳು ಮತ್ತೊಂದು ಹೆಜ್ಜೆ ಮುಂದೆ ಹೋಗಿ ದುಬಾರಿ ಕಾರುಗಳ ಮೇಲೆ ರಾಬರ್ಟ್ ಪೊಸ್ಟರ್ ಸ್ಟಿಕ್ ಮಾಡಿಸಿದ್ದಾರೆ. ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಏಪ್ರಿಲ್ 9ಕ್ಕೆ ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ.