ಐಎಂಎ ಪ್ರಕರಣದ ವಂಚಕರಿಗೆ ಶಿಕ್ಷೆಯಾಗಲೇಬೇಕು: ಶಾಸಕ ರಿಜ್ವಾನ್ ಅರ್ಷದ್ ಆಗ್ರಹ
🎬 Watch Now: Feature Video
ಮಾಡು ಇಲ್ಲವೆ ಮಡಿಯಂತಾಗಿದ್ದ ಉಪ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ 14,000ಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ಕುರಿತು ಈಟಿವಿ ಭಾರತ್ನೊಂದಿಗೆ ಮಾತನಾಡಿದ ಅವರು, 20 ವರ್ಷಗಳಿಂದ ಶಿವಾಜಿನಗರದಲ್ಲಿ ಅಭಿವೃದ್ಧಿ ಆಗಿಲ್ಲ. ಶಿವಾಜಿನಗರ ಅಭಿವೃದ್ಧಿಗೆ ನಾನು ಶ್ರಮವಹಿಸಿ ಕೆಲಸ ಮಾಡುತ್ತೇನೆ ಎಂದರು. ಇನ್ನು ಐಎಂಎ ಪ್ರಕರಣದಲ್ಲಿ ಬಡವರು ಹಣ ಕಳೆದುಕೊಂಡಿದ್ದಾರೆ. ಅಪರಾಧಿಗಳು ಯಾರೇ ಆಗಿರಲಿ, ಅವರಿಗೆ ಶಿಕ್ಷೆ ಆಗಲೇಬೇಕು ಎಂದು ನೂತನ ಶಾಸಕ ಅರ್ಷದ್ ಆಗ್ರಹಿಸಿದ್ದಾರೆ.