ಕಬಿನಿ ಹಿನ್ನೀರಿನ ವಾತಾವರಣಕ್ಕೆ ಮ್ಯೂಸಿಕ್ ಟಚ್ ಕೊಟ್ಟ ರಿಕ್ಕಿ ಕೇಜ್! - ಸಂಗೀತ ನಿರ್ದೇಶಕ ರಿಕ್ಕಿ ಕೇಜ್
🎬 Watch Now: Feature Video

ಮೈಸೂರು : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಚ್ ಡಿ ಕೋಟೆ ತಾಲೂಕಿನ ಕಬಿನಿ ಹಿನ್ನೀರಿನ ಪ್ರದೇಶದ ವಾತಾವರಣಕ್ಕೆ ರಿಕ್ಕಿ ಕೇಜ್ ಮ್ಯೂಸಿಕ್ ಟಚ್ ಕೊಟ್ಟಿದ್ದಾರೆ. ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರು, ಪ್ರಾಣಿ-ಪಕ್ಷಿಗಳು, ಕಾಡಿನ ಪರಿಸರ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುವ ಹಾಗೇ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಕರ್ನಾಟಕ ಅರಣ್ಯ ಇಲಾಖೆ ಸಹಕಾರದೊಂದಿಗೆ ರಿಕ್ಕಿ ಕೇಜ್ ಅವರು ಕಬಿನಿ ಹಿನ್ನೀರಿನ ಹಸಿರು ವಾತಾವರಣದಲ್ಲಿರುವ ಪ್ರಾಣಿ-ಪಕ್ಷಿಗಳ ಚಟುವಟಿಕೆಗೆ ಸಂಗೀತ ಟಚ್ ನೀಡುವ ಮೂಲಕ ಮುದ ನೀಡಿದ್ದಾರೆ.