ಮಳೆ ಬಂದ್ರೆ ಶುರುವಾಗುತ್ತೆ ಸಮಸ್ಯೆ... ಹಾವೇರಿಯಲ್ಲಿ ಆರಕ್ಷಕರಿಗೆ ತಲೆನೋವಾದ ವಸತಿ ಸಮುಚ್ಚಯ! - ಹಾವೇರಿ ಸಶಸ್ತ್ರ ಮೀಸಲು ಪಡೆ ವಸತಿ ಸಮುಚ್ಚಯದ ಸಮಸ್ಯೆ
🎬 Watch Now: Feature Video
ಇವರು ಕಾನೂನು ಪಾಲನೆಗಾಗಿ ಸದಾ ಸಿದ್ಧರಾಗಿರುವ ಆರಕ್ಷಕರು. ಆದರೆ ಈ ಆರಕ್ಷಕರಿಗೆ ಮಳೆಗಾಲ ಬಂದರೆ ಸಾಕು ಆತಂಕ ಶುರುವಾಗುತ್ತೆ. ಇವರು ವಾಸಿಸುವ ವಸತಿ ಸಮುಚ್ಚಯಗಳಿಗೆ ಮಳೆ ನೀರು ನುಗ್ಗುತ್ತದೆ. ಅವೈಜ್ಞಾನಿಕವಾಗಿ ಈ ಸಮುಚ್ಚಯ ನಿರ್ಮಿಸಿರುವುದೇ ಈ ಅವಾಂತರಕ್ಕೆ ಕಾರಣವಾಗಿದೆ. ಇದು ಹಾವೇರಿ ಜಿಲ್ಲೆಯಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವಸತಿ ಸಮುಚ್ಚಯದಲ್ಲಿನ ಅವ್ಯವಸ್ಥೆ.