ಸಕ್ಕರೆ ಜಿಲ್ಲೆಯಲ್ಲಿ ಅಬ್ಬರಿಸಿದ ಪೂರ್ವ ಮುಂಗಾರು: ಗರಿಗೆದರಿದ ಕೃಷಿ ಚಟುವಟಿಕೆ - mandya rain news
🎬 Watch Now: Feature Video

ಸಕ್ಕರೆ ಜಿಲ್ಲೆಯಲ್ಲಿ ಕಳೆದ ಮಧ್ಯರಾತ್ರಿಯಿಂದ ಮಳೆ ಆರಂಭವಾಗಿದ್ದು, ಅಬ್ಬರದ ಮಳೆಯಿಂದ ಕೃಷಿಕರು ಸಂತಸಗೊಂಡಿದ್ದಾರೆ. ಮಳೆಯಾಶ್ರಿತ ಭೂಮಿಯಲ್ಲಿ ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ. ವರುಣನ ಆರ್ಭಟಕ್ಕೆ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಕೊರೊನಾ ಲಾಕ್ಡೌನ್ ಇದ್ದರೂ ಕೃಷಿಗೆ ವಿನಾಯ್ತಿ ಇರುವುದರಿಂದ ರೈತರು ಕೃಷಿಗೆ ಮುಂದಾಗಿದ್ದಾರೆ. ಒಂದೆಡೆ ಮುಂಗಾರು ಆರಂಭಕ್ಕೂ ಮುನ್ನವೇ ಮಳೆ ಪ್ರಾರಂಭ ಆಗಿರುವುದು ಹರುಷ ತಂದಿದ್ದರೂ, ಇನ್ನೇನು ಕೆಲವೇ ದಿನಗಳಲ್ಲಿ ಭತ್ತದ ಬೆಳೆ ಕೊಯ್ಲಿಗೆ ಬರಲಿರುವುದರಿಂದ ಆತಂಕವೂ ಶುರುವಾಗಿದೆ.