ಕೊಡಗಿನಲ್ಲಿ ಮಳೆಯ ಅವಾಂತರ: ಮನೆ ಏರಿ ನಿಂತ ವ್ಯಕ್ತಿ! - Vinod's poultry farm and home are sinking
🎬 Watch Now: Feature Video
ಕೊಡಗು ಜಿಲ್ಲೆಯಲ್ಲಿ ಮಳೆರಾಯನ ಅವಾಂತರಕ್ಕೆ ಕುಶಾಲನಗರ ಸಮೀಪದ ಕೂಡಿಗೆ ಗ್ರಾಮದಲ್ಲಿ ವಿನೋದ್ ಎಂಬಾತನ ಕೋಳಿ ಫಾರ್ಮ್ ಮತ್ತು ಮನೆ ಜಲಾವೃತಗೊಂಡಿದೆ. ಜೀವನ ನಡೆಸುವುದಕ್ಕೆ ಆಸರೆಯಾಗಿದ್ದ ಕೋಳಿ ಫಾರ್ಮ್ ಮತ್ತು ಮನೆ ಮುಳುಗಡೆಯಾದ ಪರಿಣಾಮ ಬೇಸತ್ತ ವ್ಯಕ್ತಿ ಮನೆಯ ಮೇಲೆ ನಿಂತು ಸ್ಥಳಕ್ಕೆ ಅಧಿಕಾರಿಗಳು ಬಂದು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾನೆ. ಕಳೆದ ವರ್ಷ ಕೂಡಾ ಇದೇ ರೀತಿ ಮುಳುಗಡೆಯಾಗಿತ್ತು. ಈ ವರ್ಷವು ಹೀಗೆ ಆಗಿದೆ. ಇದಕ್ಕೆ ಶಾಶ್ವತ ಪರಿಹಾರ ಬೇಕೆಂದು ಒತ್ತಾಯಿಸಿದ್ದಾನೆ.