ಪ್ರವಾಹಕ್ಕೆ ಗದ್ದೆ ಸೇರಿದ ಗುಡ್ಡದ ಮಣ್ಣು... ಸಂಕಷ್ಟದಲ್ಲಿ ಕೊಡಗಿನ ಅನ್ನದಾತ - farmers struggling
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4308714-thumbnail-3x2-hrs.jpg)
ಕೊಡಗು: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ವಿರಾಜಪೇಟೆ ತಾಲೂಕಿನ ಹೊದ್ದೂರು ಗ್ರಾಮದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಸಾಲ-ಸೂಲ ಮಾಡಿ ಬೆಳೆದಿದ್ದ ಸುಮಾರು ಒಂದು ಎಕರೆ ಭತ್ತದ ಗದ್ದೆ ತುಂಬೆಲ್ಲಾ ಮಣ್ಣು ಹರಡಿ, ನಾಟಿ ಮಾಡಿದ್ದ ಭತ್ತದ ಪೈರು ಸಂಪೂರ್ಣ ನಾಶವಾಗಿದ್ದು, ಸಾಲದ ಮೇಲೆ ಬೆಳೆ ನಾಶ ಸೇರಿ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸದ್ಯ ಗದ್ದೆಗೆ ತುಂಬಿರುವ ಮಣ್ಣನ್ನು ತೆಗೆದು ಮರು ಹದಗೊಳಿಸುವ ಕಾಯಕದಲ್ಲಿ ತೊಡಗಿರುವ ಅನ್ನದಾತರು ಮತ್ತೆ ಜೀವನ ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿದ್ದು, ಸರ್ಕಾರ ನಮ್ಮ ಕಡೆ ಗಮನ ಹರಿಸಲಿ ಎಂದು ಆಗ್ರಹಿಸಿದ್ದಾರೆ.