ದಸರಾ ಹಬ್ಬ ಆಚರಣೆಗೆ ಪೆಂಡಾಲ್ ಹಾಕಲು ಬಿಜೆಪಿ-ಜೆಡಿಎಸ್ ಮುಖಂಡರ ಕಚ್ಚಾಟ.. - mandya latest news
🎬 Watch Now: Feature Video
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಿಸಲು ಪೆಂಡಾಲ್ ಹಾಕುವ ಸಂಬಂಧ ಬಿಜೆಪಿ-ಜೆಡಿಎಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದೆ. ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಮತ್ತು ಬಿಜೆಪಿ ಮುಖಂಡರ ನಡುವೆ ಬೀದಿ ಕಾಳಗ ಏರ್ಪಟ್ಟಿದೆ. ಈಗ ನಮ್ಮ ಸರ್ಕಾರ ಇದೆ. ಹೀಗಾಗಿ ಶಾಮಿಯಾನವನ್ನು ನಾವು ಹಾಕಿಸುತ್ತೇವೆ ಅಂತಾ ಬಿಜೆಪಿ ನಾಯಕರು ಹೇಳಿದ್ದಾರೆ. ಇದಕ್ಕೆ ಆಕ್ಷೇಪಿಸಿ ಜೆಡಿಎಸ್ ಮುಖಂಡರು ಜಗಳವಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.