ವಿಧಾನಪರಿಷತ್ ಕಲಾಪ: ಬಿ.ಕೆ.ಹರಿಪ್ರಸಾದ್-ಆಯನೂರು ಮಂಜುನಾಥ್ ಜಟಾಪಟಿ- VIDEO - ವಿಧಾನಪರಿಷತ್ ಕಲಾಪ
🎬 Watch Now: Feature Video
ಬೆಂಗಳೂರು : ವಿಧಾನಪರಿಷತ್ ಕಲಾಪದಲ್ಲಿ ಕಾಂಗ್ರೆಸ್ನ ಬಿ.ಕೆ. ಹರಿ ಪ್ರಸಾದ್ ಮತ್ತು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ನಡುವೆ ತೀವ್ರ ಜಟಾಪಟಿ ನಡೆಯಿತು. ಕಲಾಪದಲ್ಲಿ ಹರಿ ಪ್ರಸಾದ್ ಮಾತನಾಡುತ್ತಿದ್ದ ವೇಳೆ ಮಧ್ಯೆ ಪ್ರವೇಶಿಸಿದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಅವರು, ಯಾರು ಕೂಡ ಪೀಠವನ್ನು ಗದರಿಸುವ ಮತ್ತು ಮಧ್ಯೆ ಪ್ರವೇಶ ಮಾಡುವ ಹಾಗಿಲ್ಲ ಎಂದರು. ಹಾಗೆ ಮಾಡಿದರೆ ಪೀಠಕ್ಕೆ ಮಾಡಿದ ಅಗೌರವ ಆಗುತ್ತದೆ. ಅದಕ್ಕೆ ಪೀಠ ತಕ್ಕ ಕ್ರಮವನ್ನು ಕೈಗೊಳ್ಳುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಂಜುನಾಥ್ ಮತ್ತು ಹರಿಪ್ರಸಾದ್ ಅವರ ನಡುವೆ ತೀವ್ರ ವಾಗ್ವಾದ ನಡೆಯಿತು.