ಮದ್ಯದ ಅಮಲಲ್ಲಿ ಕಾರುಗಳಿಗೆ ಡಿಕ್ಕಿ: ಲಾರಿ ಚಾಲಕನಿಗೆ ಥಳಿತ - Nelamangala
🎬 Watch Now: Feature Video
ನೆಲಮಂಗಲ: ರಸ್ತೆ ಬದಿಯಲ್ಲಿ ನಿಂತಿದ್ದ ಕಾರುಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಚಾಲಕನಿಗೆ ಸಾರ್ವಜನಿಕರು ಗೂಸಾ ಕೊಟ್ಟಿದ್ದಾರೆ. ನೆಲಮಂಗಲ ಪಟ್ಟಣದ ವೀವರ್ ಕಾಲೋನಿ ಬಳಿ ಘಟನೆ ನಡೆದಿದ್ದು. ಮದ್ಯದ ಅಮಲಿನಲ್ಲಿ ರಸ್ತೆ ಬದಿ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆಸಿದ್ದಾನೆ. ಪರಿಣಾಮ ಎರಡು ಕಾರು ಜಖಂಗೊಂಡಿವೆ. ಇದರಿಂದ ಆಕ್ರೋಶಗೊಂಡ ಜನರು ಲಾರಿ ಚಾಲಕನನ್ನ ಹಿಡಿದು ಥಳಿಸಿದ್ದಾರೆ. ಚಾಲಕನನ್ನು ಲಾರಿ ಸಮೇತ ನೆಲಮಂಗಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.