ಜನರಿಗೆ ಮೊದಲು ಆಹಾರ ಸಾಮಗ್ರಿ ಒದಗಿಸಿ ನಂತರ ಲಾಕ್‌ಡೌನ್ ಮಾಡಿ: ಸಿಪಿಐಎಂ ಪ್ರತಿಭಟನೆ - CPIM protest
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8035693-580-8035693-1594811956536.jpg)
ಮಂಗಳೂರು: ಕೊರೊನಾ ಸೋಂಕಿನ ನಿವಾರಣೆಗೆ ಲಾಕ್‌ಡೌನ್ ಒಂದೇ ಪರಿಹಾರವಲ್ಲ. ಒಂದು ವೇಳೆ ಲಾಕ್‌ಡೌನ್ ಮಾಡುವುದಾದಲ್ಲಿ, ಮೊದಲು ಜನರಿಗೆ ವಾರಗಳ ಅವಧಿಗೆ ಆಗುವಷ್ಟು ಆಹಾರ ಸಾಮಗ್ರಿಗಳನ್ನು ಒದಗಿಸಿ ಎಂದು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಸಿಪಿಐ(ಎಂ) ದ.ಕ.ಜಿಲ್ಲಾ ಸಮಿತಿಯಿಂದ ನಗರದ ಮಿನಿವಿಧಾನ ಸೌಧದ ಮುಂಭಾಗ ಭಿತ್ತಿ ಚಿತ್ರಗಳ ಪ್ರದರ್ಶನ ಹಾಗೂ ಪ್ರತಿಭಟನೆ ನಡೆಯಿತು. ಈ ಸಂದರ್ಭ ಕೊರೊನಾ ಸೋಂಕಿತರಿಗೆ ತಾರತಮ್ಯವಿಲ್ಲದೆ ಉಚಿತ ಚಿಕಿತ್ಸೆ ಒದಗಿಸಲಿ. ಸೀಲ್ಡೌನ್ ಪ್ರದೇಶದ ಜನರ ಸಂಕಷ್ಟಗಳಿಗೆ ಸ್ಪಂದಿಸಿ. ಖಾಸಗಿ ಆಸ್ಪತ್ರೆಗಳ ಲೂಟಿಕೋರತನಕ್ಕೆ ಕಡಿವಾಣ ಹಾಕಿರಿ ಎಂದು ಸರ್ಕಾರವನ್ನು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಸಂದರ್ಭ ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಸಿಪಿಐ(ಎಂ) ಜಿಲ್ಲಾ ನಾಯಕರಾದ ಜಯಂತಿ ಬಿ.ಶೆಟ್ಟಿ, ಸುರೇಶ್ ಬಜಾಲ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.