ಬೆಳಗಾವಿ: ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಆಗ್ರಹಿಸಿ ಪ್ರತಿಭಟನೆ - Protest in Belgavi
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7727178-thumbnail-3x2-news.jpg)
ಚೀನಾ ವಸ್ತುಗಳ ಬಹಿಷ್ಕಾರಿಸುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ನಮ್ಮ ದೇಶದ 20 ವೀರ ಯೋಧರನ್ನು ಬಲಿ ಪಡೆದಿರುವ ಚೀನಾ ದೇಶದ ಮನಸ್ಸು ವಿಕೃತವಾಗಿದೆ. ಚೀನಾದ ವಸ್ತುಗಳನ್ನು ನಾವು ಖರೀದಿಸುವುದರಿಂದ ಅದರ ಲಾಭ ಪಡೆದುಕೊಂಡು ಚೀನಾ ನಮಗೆ ದ್ರೋಹ ಬಗೆಯುತ್ತಿದೆ. ಹೀಗಾಗಿ ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ಎಲ್ಲ ವಸ್ತುಗಳು ನಿಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡಿದರು.