ಪೊಲೀಸ್ ಹುತಾತ್ಮರ ದಿನಾಚರಣೆ:ಕಡಲತೀರದಲ್ಲಿ ಇಂಪು ನೀಡಿದ ಪೊಲೀಸ್ ಬ್ಯಾಂಡ್ - Karwar Police Band
🎬 Watch Now: Feature Video
ಕಾರವಾರ: ಪೊಲೀಸ್ ಹುತಾತ್ಮರ ದಿನಾಚರಣೆ ನಿಮಿತ್ತ ಇಂದು ಇಳಿ ಸಂಜೆ ಹೊತ್ತು ಕಾರವಾರದ ರವೀಂದ್ರನಾಥ್ ಟ್ಯಾಗೋರ್ ಕಡಲತೀರದ ಮಯೂರ ವರ್ಮ ವೇದಿಕೆಯ ಮುಂಭಾಗ ಆಯೋಜಿಸಿದ್ದ ಪೊಲೀಸ್ ಬ್ಯಾಂಡ್ ಸಮೂಹ ವಾದ್ಯಮೇಳ ಕಡಲತೀರದಲ್ಲಿ ವಿಹರಿಸಲು ಬಂದಿದ್ದವರ ಕಣ್ಣಿಗೆ ತಂಪು, ಕಿವಿಗೆ ಇಂಪು, ಮನಸ್ಸಿಗೆ ಮುದ ನೀಡಿತು. ಸಂಜೆ 5.30ಕ್ಕೆ ವಾದ್ಯ ಮೇಳಕ್ಕೆ ಚಾಲನೆ ಲಭಿಸಿತು. ಆರಂಭದಲ್ಲಿ ಎಲ್ಲ ಬ್ಯಾಂಡ್ ತಂಡಗಳ ಸದಸ್ಯರು ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು. ಆ ಬಳಿಕ 20 ನಿಮಿಷ ವಿವಿಧ ರೀತಿಯ ರಾಗಗಳನ್ನು ನುಡಿಸಿದರು. ಈ ವೇಳೆ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಶನ್, ಡಿಎಫ್ಒ ವಸಂತರೆಡ್ಡಿ ಉಪಸ್ಥಿತರಿದ್ದರು.