ಅಪರಾಧಿಗಳಿಗೆ ಸಿಂಹಸ್ವಪ್ನವಾಗಿದ್ದ ಱಂಬೋ ವಿಧಿವಶ... ಪೊಲೀಸ್ ಇಲಾಖೆಯಲ್ಲಿ ಮಡುಗಟ್ಟಿದ ಶೋಕ - police dog rambo died at gadag
🎬 Watch Now: Feature Video
ಅದು ಅಪರಾಧಿಗಳ ಪಾಲಿನ ಸಿಂಹಸ್ವಪ್ನವಾಗಿತ್ತು. ಅಪರಾಧ ಮಾಡಿ ತಪ್ಪಿಸಿಕೊಂಡಿದ್ದೇವೆ ಅಂದುಕೊಂಡವರ ಕೈಗೆ ಕೋಳ ಬೀಳುವಂತೆ ಮಾಡಿತ್ತು. ಫೀಲ್ಡಿಗಿಳಿದ್ರೆ ಅಪರಾಧಿಗಳನ್ನ ಹಿಡಿಯದೇ ಮರಳಿ ಬರೋ ಮಾತೇ ಇರಲಿಲ್ಲ. ಅಂತಹ ಪೊಲೀಸ್ ಶ್ವಾನವೊಂದು ಮರಣ ಹೊಂದಿದ್ದು, ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟವುಂಟಾಗಿದೆ.