ಹಿರೇಹಳ್ಳದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ಗಳ ನಿರ್ಮಾಣಕ್ಕೆ ಯೋಜನೆ - Plan to build barrages
🎬 Watch Now: Feature Video

ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಪುನಶ್ಚೇತನಗೊಂಡಿರುವ ಹಿರೆಹಳ್ಳಕ್ಕೆ ಮತ್ತೊಂದು ಹೊಸ ಕಳೆ ತರುವ ಚಿಂತನೆ ನಡೆದಿದೆ. ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಈ ಬಗ್ಗೆ ಯೋಜನೆ ರೂಪಿಸಿದ್ದು, ಅಂದುಕೊಂಡಂತೆ ಎಲ್ಲವೂ ನಡೆದರೆ ಮುಂಬರುವ ದಿನಗಳಲ್ಲಿ ಹಿರೇಹಳ್ಳದಲ್ಲಿ ವರ್ಷಪೂರ್ತಿ ನೀರು ಹರಿಯಲಿದೆ. ಸುಮಾರು 24 ಕಿಲೋ ಮೀಟರ್ ಉದ್ದವಿರುವ ಈ ಹಿರೇಹಳ್ಳದಲ್ಲಿ ಈಗಾಗಲೇ ಸಣ್ಣ ನೀರಾವರಿ ಇಲಾಖೆ ಮೂಲಕ 43 ಕೋಟಿ ರೂಪಾಯಿ ವೆಚ್ಚದಲ್ಲಿ ಆರೇಳು ಬ್ರಿಡ್ಜ್ ಕಂ ಬ್ಯಾರೇಜ್ಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಕರ್ನಾಟಕ ನೀರಾವರಿ ನಿಗಮದ ಮೂಲಕ ಇನ್ನೊಂದಿಷ್ಟು ಬ್ರಿಡ್ಜ್ ಕಂ ಬ್ಯಾರೇಜ್ನಿರ್ಮಾಸಿ ಹಿರೇಹಳ್ಳದಲ್ಲಿ ವರ್ಷಪೂರ್ತಿ ನೀರು ಹರಿಯುವಂತೆ ಮಾಡುವ ಚಿಂತನೆ ಚಿಗುರಿದೆ.