ಹೊಸಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ಜನಜಂಗುಳಿ: ವೀಕೆಂಡ್ ಕರ್ಫ್ಯೂಗಿಲ್ಲ ಕಿಮ್ಮತ್ತು - ಹೊಸಪೇಟೆ ಎಪಿಎಂಸಿ ಮಾರುಕಟ್ಟೆ
🎬 Watch Now: Feature Video
ಹೊಸಪೇಟೆ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಆದರೂ ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಸಾರ್ವಜನಿಕರು ತರಕಾರಿ ಕೊಳ್ಳಲು ಮುಗಿಬಿದ್ದಿದ್ದಾರೆ. ಜನರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಕೋವಿಡ್ ನಿಯಮ ಗಾಳಿಗೆ ತೂರಿದ್ದಾರೆ. ನೆಪ ಮಾತ್ರಕ್ಕೆ ಎಪಿಎಂಸಿ ಮುಖ್ಯ ದ್ವಾರಕ್ಕೆ ಬೀಗವನ್ನ ಹಾಕಲಾಗಿದ್ದು, ಇನ್ನೊಂದು ಬಾಗಿಲ ಮೂಲಕ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಡಲಾಗಿದೆ. ಜನಜಂಗುಳಿ ತಪ್ಪಿಸಲು ಈಗಾಗಲೇ ತಾಲೂಕು ಆಡಳಿತ ತಾಲೂಕು ಮೈದಾನ ಹಾಗೂ ಪಿಬಿಎಸ್ ಶಾಲೆ ಸೇರಿದಂತೆ ಇನ್ನಿತರೆಡೆ ತರಕಾರಿ ಕೊಳ್ಳಲು ಅವಕಾಶ ಕಲ್ಪಿಸಿದೆ. ಆದರೂ ಸಹ ಜನರು ಸರ್ಕಾರದ ನಿಯಮ ಗಾಳಿಗೆ ತೂರಿ ಗುಂಪುಗೂಡುತ್ತಿದ್ದಾರೆ.