ಕೊರೊನಾ ಭೀತಿ: ಬೇವಿನ ಮರಕ್ಕೆ ನೇಣು ಹಾಕಿ ಕುರಿ ಬಲಿ ಕೊಟ್ಟ ಜನ - ಕುರಿ ಬಲಿ ಕೊಟ್ಟ ದುಷ್ಕರ್ಮಿಗಳು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6618698-thumbnail-3x2-jayjpg.jpg)
ಧಾರವಾಡ: ಬೇವಿನ ಮರಕ್ಕೆ ಕುರಿಯನ್ನು ನೇಣು ಹಾಕಿ ಬಲಿ ಕೊಟ್ಟ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ನಡೆದಿದೆ. ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದ್ದು, ಕುರಿಯನ್ನು ನೇಣು ಹಾಕಿದ್ರೆ ರೋಗಗಳು ಮಾಯ ಎನ್ನುವ ಮೂಢನಂಬಿಕೆಯಿಂದ ಈ ರೀತಿ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿವೆ. ಕುರಿಗಾಯಿಗಳು ಆಗಾಗ ಕುರಿಗಳಿಗೆ ರೋಗ ಬರದಂತೆ ನೇಣು ಹಾಕುವ ನಂಬಿಕೆಯಿದೆ. ಈ ಹಿನ್ನೆಲೆ ಕೊರೊನಾ ಬಾರದಿರಲೆಂದು ನೇಣು ಹಾಕಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮದ ಹೊರವಲಯದ ಬೇವಿನ ಮರಕ್ಕೆ ನೇಣು ಹಾಕಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.