ಆಗ ಅನ್ನಕ್ಕಾಗಿ ಅಲೆದಾಟ, ಈಗ ಪುಸ್ತಕಕ್ಕೆ ಪರದಾಟ:ವಿದ್ಯಾರ್ಥಿಗಳಿಗೆ ಬೇಕಿದೆ ಹೊತ್ತಿಗೆಗಳ ನೆರವು - kannadanews
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4248240-thumbnail-3x2-surya.jpg)
ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆ ಕರ್ನಾಟಕದಲ್ಲಿ ಜಲಪ್ರಳಯವನ್ನೇ ಸೃಷ್ಟಿಸಿತ್ತು. ಮಾತ್ರವಲ್ಲದೆ ಸಿಕ್ಕ ಸಿಕ್ಕ ಮನೆಗಳನ್ನು ನೆಲಕ್ಕೆ ಉರುಳಿಸಿ ಅದೆಷ್ಟೋ ಮಂದಿಯನ್ನು ಬೀದಿಗೆ ತಳ್ಳಿತ್ತು. ನದಿಗಳು ಉಕ್ಕಿ ಹರಿದರೆ ಪ್ರವಾಹದಿಂದ ನದಿ ತೀರದ ಗ್ರಾಮಗಳು ಅಕ್ಷರಶಃ ಮುಳುಗಡೆಯಾಗಿದ್ದವು. ಇದರಿಂದ ಮನೆಗಳಲ್ಲಿದ್ದ ದವಸಧಾನ್ಯಗಳು, ಬಟ್ಟೆಬರೆ ಇತರೆ ವಸ್ತುಗಳು ನೀರಿಪಾಲಾಗಿತ್ತು. ಆದ್ರೆ ಇದರಲ್ಲಿ ವಿದ್ಯಾರ್ಥಿಗಳ ಬದುಕು ಕೂಡ ಕೊಚ್ಚಿಹೋಗಿದೆ.