ಸಕ್ಕರೆ ನಾಡಲ್ಲಿ ರಥ ಸಪ್ತಮಿ ಸಂಭ್ರಮ: ದೇವಾಲಯಗಳಲ್ಲಿ ರಥೋತ್ಸವ - ಮಂಡ್ಯ ಸುದ್ದಿ
🎬 Watch Now: Feature Video
ರಥ ಸಪ್ತಮಿ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಹಲವು ದೇವಾಲಯಗಳಲ್ಲಿ ರಥೋತ್ಸವ ನಡೆಯಿತು. ಕೆ.ಆರ್.ಪೇಟೆಯ ಹೇಮಗಿರಿ, ಮೇಲುಕೋಟೆ ಹಾಗೂ ಶ್ರೀರಂಗಪಟ್ಟಣದ ರಥೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಶ್ರೀರಂಗಪಟ್ಟಣದಲ್ಲಿ ರಥ ಸಪ್ತಮಿ ಹಿನ್ನೆಲೆ ಸೂರ್ಯಮಂಡಲ ಪೂಜೆ ಮಾಡಲಾಯಿತು. ಇನ್ನು ಮೇಲುಕೋಟೆಯಲ್ಲೂ ರಥೋತ್ಸವದ ಹಿನ್ನೆಲೆಯಲ್ಲಿ ರಥವನ್ನು ಭಕ್ತರು ಎಳೆಯುವ ಮೂಲಕ ಹರಕೆ ತೀರಿಸಿದರು. ನಂತರ ಚಲುವ ನಾರಾಯಣನಿಗೆ ವಿಶೇಷ ಪೂಜೆ ಸಲ್ಲಿಸಿ, ಹಣ್ಣು-ಜವನವನ್ನು ರಥಕ್ಕೆ ಅರ್ಪಿಸಿದರು. ಹಾಗೇ ಕೆ.ಆರ್.ಪೇಟೆಯ ಹೇಮಗಿರಿಯಲ್ಲಿ ನಡೆದ ರಥೋತ್ಸವದಲ್ಲಿ ಬಿಜೆಪಿ ಶಾಸಕ ನಾರಾಯಣಗೌಡ ಪಾಲ್ಗೊಂಡು ರಥ ಎಳೆದು, ದೇವರಿಗೆ ಪೂಜೆ ಸಲ್ಲಿಸಿ ನಂತರ ಹೇಮಾವತಿ ನದಿಯಲ್ಲಿ ಬೋಟಿಂಗ್ ನಡೆಸಿದರು.