ನಿಯಮ ಉಲ್ಲಂಘಿಸಿ ತರಕಾರಿ ವ್ಯಾಪಾರ ಮಾಡುತ್ತಿದ್ದವರಿಗೆ ಪಾಲಿಕೆ ಶಾಕ್! - belagavi lockdown
🎬 Watch Now: Feature Video

ಬೆಳಗಾವಿ: ಕೊರೊನಾ ನಿಯಂತ್ರಣಕ್ಕೆ ದೇಶದಲ್ಲಿ ಹೇರಿರುವ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಬೀದಿಬದಿ ತರಕಾರಿ ವ್ಯಾಪಾರ ಮಾಡುತ್ತಿದ್ದವರಿಗೆ ಬೆಳಗಾವಿ ಮಹಾನಗರ ಪಾಲಿಕೆ ಸಿಬ್ಬಂದಿ ಶಾಕ್ ನೀಡಿದರು. ಬೆಳಗಾವಿಯ ಕಾಕತಿವೇಸ್‌ನಲ್ಲಿ ಮಾರಾಟ ಮಾಡುತಿದ್ದ ವ್ಯಾಪಾರಸ್ಥರ ತರಕಾರಿ ಸಹಿತ ಸಾಮಗ್ರಿಗಳನ್ನು ಪಾಲಿಕೆ ಸಿಬ್ಬಂದಿ ವಾಹನದಲ್ಲಿ ಎತ್ತಿಕೊಂಡು ಹೋದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದರೂ ವ್ಯಾಪಾರಸ್ಥರು ಗುಂಪು ಗುಂಪಾಗಿ ಮಾರಾಟ ಮಾಡುತ್ತಿದ್ದರು. ನನ್ನ ಊಟ ಇದೇ ಕೊಡಿ ಎಂದು ವೃದ್ಧೆ ವಾಹನ ಬೆನ್ನತ್ತಿದ್ದು, ಸ್ವಲ್ಪ ದೂರ ಹೋದ ಮೇಲೆ ಬುಟ್ಟಿ ಮರಳಿಸಿದರು.