ಚಿಕ್ಕಮಗಳೂರಲ್ಲಿ ಕಳೆಗುಂದಿದ ಹಬ್ಬ; ಕೊಳ್ಳುವವರಿಲ್ಲದೇ ಬೀದಿಯಲ್ಲೇ ಕುಳಿತ ಗಣೇಶ ಮೂರ್ತಿಗಳು - ಗೌರಿ-ಗಣೇಶ ಹಬ್ಬ
🎬 Watch Now: Feature Video
ಪ್ರತಿವರ್ಷ ಗೌರಿ-ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ವಕ್ಕರಿಸಿರುವ ಮಹಾಮಾರಿ ಕೊರೊನಾ ವೈರಸ್ನಿಂದ ಹಬ್ಬದ ವಾತಾವರಣವೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾಯವಾದಂತೆ ಕಾಣಿಸುತ್ತಿದೆ. ಗಣಪತಿ ಪ್ರತಿಷ್ಠಾಪನೆ ಮಾಡಲು ಯುವಕರು ಸಂಭ್ರಮ-ಸಡಗರದಿಂದ ಸಜ್ಜಾಗಿ ಬರುತ್ತಿದ್ದರು. ಗಣಪತಿ ಮೂರ್ತಿ ತಯಾರಕರು ಬೀದಿಯಲ್ಲಿ ಜನರಿಲ್ಲದೇ, ತಯಾರು ಮಾಡಿದಂತಹ ಗಣಪತಿಗಳು ಕೂತಲ್ಲೇ ಕೂತಿವೆ. ಈ ಬಾರಿ ಕೊರೊನಾ ವೈರಸ್ ಕರಿಛಾಯೆ ಗಣಪತಿ ಹಬ್ಬದ ಮೇಲೆ ಬಿದ್ದಿದೆ.