ಮಂಗಳೂರಿಗೆ ತಾಗದ ಬಂದ್ ಬಿಸಿ: ಖಾಸಗಿ ಬಸ್‌ಗಳ ಪ್ರಾಬಲ್ಯವೇ ಕಾರಣ - Mangaluru latest News
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11310685-359-11310685-1617777930634.jpg)
ಮಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರವು ಮಂಗಳೂರಿನಲ್ಲಿ ಪ್ರಯಾಣಿಕರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಪ್ರಾಬಲ್ಯವಿದೆ. ನಗರದಲ್ಲಿ ಖಾಸಗಿ ಬಸ್ಗಳೇ ಓಡಾಟ ನಡೆಸುತ್ತಿದೆ. ಗ್ರಾಮೀಣ ಭಾಗದಲ್ಲಿ ಮತ್ತು ಜಿಲ್ಲೆಯ ದೂರದೂರಿಗೆ ಮತ್ತು ಹೊರಜಿಲ್ಲೆಗಳಿಗೆ ಕೆಎಸ್ಆರ್ಟಿಸಿ ಬಸ್ ಸೇವೆ ಇದ್ದು, ಇಂದು ಈ ಭಾಗಗಳಿಗೆ ತೆರಳುವವರಿಗೆ ಸರ್ಕಾರಿ ಬಸ್ಗಳು ಲಭ್ಯವಾಗಿಲ್ಲ. ಆದರೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 10 ಗಂಟೆಯವರೆಗೆ ಮೈಸೂರು ಮತ್ತು ಮುಡಿಪುಗೆ ಎರಡು ಬಸ್ ಪ್ರಯಾಣ ಬೆಳೆಸಿದೆ. ಇನ್ನೂ ಸರ್ಕಾರಿ ಬಸ್ಗಳೇ ಓಡಾಟ ನಡೆಸುತ್ತಿದ್ದ ರೂಟ್ನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ಬಸ್ಗಳನ್ನು ಓಡಿಸಲಾಗುತ್ತಿದೆ. ಮಂಗಳೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದಲೂ ಖಾಸಗಿ ಬಸ್ಗಳು ಓಡಾಟ ನಡೆಸುತ್ತಿದೆ. ಕೇರಳದ ಕೆಎಸ್ಆರ್ಟಿಸಿಯಿಂದ ಕಾಸರಗೋಡು ಕಡೆಗೆ ಬಸ್‌ಗಳ ಓಡಾಟ ನಿರಂತರವಾಗಿದೆ. ಒಟ್ಟಿನಲ್ಲಿ ಸರ್ಕಾರಿ ಬಸ್ ರೂಟ್ನಲ್ಲಿ ಖಾಸಗಿ ಬಸ್‌ಗಳ ಓಡಾಟದಿಂದ ಜನರಿಗೆ ಅನಾನುಕೂಲವಾಗುವುದು ತಪ್ಪಿದೆ.