ತುಮಕೂರಲ್ಲಿ ಜನರಿಗೆ ಎನ್ಜಿಒಗಳಿಂದ 12 ಲಕ್ಷ ಮಾಸ್ಕ್ ವಿತರಣೆ - ಕೊರೊನಾ ಸೋಂಕಿತರಿಗೆ ಎನ್ಜಿಒ ಸಹಾಯ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7550780-thumbnail-3x2-news.jpg)
ತುಮಕೂರು: ಲಾಕ್ಡೌನ್ ಆರಂಭವಾದ ದಿನದಿಂದಲೂ ಜಿಲ್ಲೆಯಲ್ಲಿ ಅನೇಕ ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಘಟನೆಯವರು ಹಸಿದವರು, ನಿರ್ಗತಿಕರಿಗೆ ಸದ್ದಿಲ್ಲದೆ ಸಹಾಯಹಸ್ತ ಚಾಚಿದ್ದಾರೆ. ಜನಪ್ರತಿನಿಧಿಗಳು, ಸ್ವಯಂಸೇವಾ ಸಂಘಟನೆ ಸದಸ್ಯರು ಜಿಲ್ಲೆಯ ವಿವಿಧೆಡೆ 1,77,448 ಸಿದ್ಧಪಡಿಸಿದ ಆಹಾರದ ಪೊಟ್ಟಣ ನೀಡಿ ಜನರ ಹಸಿವು ನೀಗಿಸಿದ್ದಾರೆ. ಕೊರೊನಾ ಹರಡುವಿಕೆಯಿಂದ ಪಾರಾಗಲು ಅಗತ್ಯವಿದ್ದ ಮಾಸ್ಕ್ಗಳಿಗಾಗಿ ಅನೇಕ ಮಂದಿ ಪರದಾಡಿದ್ದರು. ಇಂತಹ ಸಂದರ್ಭದಲ್ಲಿ ಎನ್ಜಿಒಗಳು ರೈತರು, ಬಡವರಿಗೆ ಸುಮಾರು 12 ಲಕ್ಷ ಮಾಸ್ಕ್ಗಳನ್ನು ಜಿಲ್ಲಾಧ್ಯಂತ ವಿತರಣೆ ಮಾಡಿವೆ. ಜಿಲ್ಲಾಡಳಿತದ ವತಿಯಿಂದ 20,000 ವಿತರಿಸಲಾಗಿದೆ.