ಜಯನಗರದ ಸೌತ್ ಎಂಡ್ ವೃತ್ತದಲ್ಲಿ ಪ್ರಕೃತಿವನ ಲೋಕಾರ್ಪಣೆ - new park open in jayanagara
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4951833-thumbnail-3x2-sow.jpg)
ಜಯನಗರದ ಸೌತ್ ಎಂಡ್ ವೃತ್ತದಲ್ಲಿ ನದಿ ಮೂಲಗಳು, ಪ್ರಕೃತಿಯನ್ನು ಉಳಿಸಿ ಎಂಬ ಸಂದೇಶದೊಂದಿಗೆ ಪ್ರಕೃತಿವನ ಎಂಬ ಪಾರ್ಕ್ ನಿರ್ಮಿಸಲಾಗಿದೆ.ಈ ಪಾರ್ಕ್ನ್ನ 1.5 ಎಕರೆ ವಿಸ್ತೀರ್ಣದಲ್ಲಿ ಹಾಗೂ 1 ಕೋಟಿ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. 43 ಅಡಿ ಎತ್ತರದ ಪ್ರಕೃತಿ ದೇವನ ಮೂರ್ತಿ ಪಾರ್ಕಿನ ಕೇಂದ್ರ ಬಿಂದುವಾಗಿದೆ. ಇನ್ನು,ಪಾರ್ಕಿನಲ್ಲಿ 18 ಬಗೆಯ ಹೂ ಗಿಡಗಳು, 18 ಬಣ್ಣದ ಎಲೆಯ ಗಿಡಗಳನ್ನು ಒಳಗೊಂಡಂತೆ ಹಲವು ಗಿಡಮೂಲಿಕಾ ಸಸ್ಯಗಳನ್ನ ಬೆಳೆಸಲಾಗಿದೆ. ಇವುಗಳನ್ನು ಹಿಮಾಲಯ, ದಾಂಡೇಲಿ, ಆಗುಂಬೆಯ ದಟ್ಟ ಕಾಡುಗಳಿಂದ ತರಲಾಗಿದೆ. ಇದಲ್ಲದೆ ಪಾರ್ಕ್ ಆವರಣದಲ್ಲಿ ಎರಡು ಬೃಹತ್ ಮಳೆನೀರು ಇಂಗು ಗುಂಡಿಗಳನ್ನ ಸಹ ನಿರ್ಮಿಸಲಾಗಿದ್ದು, ಪ್ರಕೃತಿದತ್ತವಾಗಿ ಸಿಗುವ ವಸ್ತುಗಳಿಂದಲೇ ಪಾರ್ಕ್ ನಿರ್ವಹಣೆ ಮಾಡಲಾಗ್ತಿದೆ.