ಜಿಲ್ಲಾ ಪೊಲೀಸ್ ಇಲಾಖೆಯಿಂದ ರಾಷ್ಟ್ರೀಯ ಏಕತಾ ಓಟ ಆಯೋಜನೆ - Latest and Breaking News on run for unity

🎬 Watch Now: Feature Video

thumbnail

By

Published : Oct 31, 2020, 8:08 PM IST

ಧಾರವಾಡ : ಮಾಜಿ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ​ನಿಮಿತ್ತ ಜಿಲ್ಲಾ ಪೊಲೀಸ್ ಇಲಾಖೆಯಿಂದ ನರೆಂದ್ರ ಗ್ರಾಮದಲ್ಲಿ ಏಕತಾ ಓಟ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಎಸ್​ಪಿ ಪಿ.ಕೃಷ್ಣಕಾಂತ ಮಾರ್ಗದರ್ಶನದಡಿ ಜನಜಾಗೃತಿ ಮೂಡಿಸಲಾಯಿತು. ಧಾರವಾಡ ಗ್ರಾಮೀಣ ಸಿಪಿಐ ಎಸ್.ಸಿ.ಪಾಟೀಲ್​ ಮತ್ತು ಗರಗ ಸಿಪಿಐ ಪ್ರಸಾದ ಪಣೇಕರ ನೇತೃತ್ವದಲ್ಲಿ ಪಿಎಸ್ಐ ಮಹೇಂದ್ರಕುಮಾರ ನಾಯಕ್ ಹಾಗೂ ಕಿರಣ ಮೊಹಿತೆ ಅವರು ಗ್ರಾಮದ ಪ್ರಮುಖ ಬೀದಿಗಳಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಮೆರವಣಿಗೆ ಮೂಲಕ ಸಂಚರಿಸಿದರು. ಸಾರ್ವಜನಿಕರೊಂದಿಗೆ ಏಕತಾ ದಿನದ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಏಕತಾ ದಿನದ ಅಂಗವಾಗಿ ಸಮಾಜದಲ್ಲಿ ಏಕತೆ, ಭಾವೈಕ್ಯತೆ, ಸಾಮರಸ್ಯ ಕಾಪಾಡುವ ಕುರಿತು ತಿಳುವಳಿಕೆ ನೀಡಲಾಯಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.