ರೈಲ್ವೆ ನಿಲ್ದಾಣದ ಬಳಿ ಸಂಜೆ 5.30ರವರೆಗೆ ಯಾರೂ ಬರದಂತೆ ನಾಮಫಲಕ ಅಳವಡಿಕೆ - Bangalore
🎬 Watch Now: Feature Video

ಬೆಂಗಳೂರು: ಕೊರೊನಾ ಲಾಕೌಡೌನ್ ಕೊಂಚ ಮಟ್ಟಿಗೆ ಸಡಿಲಿಕೆಯಾಗಿದೆ. ಸಿಲಿಕಾನ್ ಸಿಟಿಯಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ, ಓಲಾ, ಆಟೋ ಓಡಾಟ ಶುರು ಮಾಡಿದೆ. ಇದರ ಜೊತೆಗೆ ಇಂದು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಇಂದು ದೆಹಲಿ ಹಾಗೂ ರಾಜಸ್ಥಾನಕ್ಕೆ ಎರಡು ರೈಲು ಹೊರಡಲಿದೆ. ಹೀಗಾಗಿ ಕೊರೊನಾ ಸೋಂಕು ಹರಡದಂತೆ ಸದ್ಯ ಹಗಲು ಹೊತ್ತು ರೈಲ್ವೆ ನಿಲ್ದಾಣದ ಬಳಿ ಬ್ಯಾರಿಕೇಡ್ ಅಳವಡಿಸಿ ಭದ್ರತೆ ವಹಿಸಲಾಗಿದೆ. ಹಾಗೆಯೇ ಸಂಜೆ 5.30ರವರೆಗೆ ಯಾರು ಕೂಡ ರೈಲ್ವೆ ನಿಲ್ದಾಣದ ಬಳಿ ಬಾರದಂತೆ ನಾಮಫಲಕ ಅಳವಡಿಸಿದ್ದು, ಸದ್ಯ ಪೊಲೀಸರು ಬಿಗಿ ಭದ್ರತೆ ವಹಿಸಿದ್ದಾರೆ.