ಸುಪ್ರೀಂನಿಂದ ಉಪ ಚುನಾವಣೆ ಮುಂದೂಡಿಕೆ ವಿಚಾರ : ಹೆಚ್ಡಿಕೆ ಹೇಳಿಕೆಗೆ ಕಟೀಲ್ ತಿರುಗೇಟು - latest bangalore news
🎬 Watch Now: Feature Video
ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ಚುನಾವಣೆ ಮುಂದೂಡಿಕೆ ಮಾಡಿಸಿದಂತಹ ಕೆಲಸ ಮಾಡಿರಬಹುದೇನೋ, ಆದರೆ ಬಿಜೆಪಿಗೆ ಇದರ ಅವಶ್ಯಕತೆಯಿಲ್ಲ ಎಂದು ಉಪ ಚುನಾವಣೆ ಮುಂದೂಡಿಕೆಯಲ್ಲಿ ಬಿಜೆಪಿ ಕೈವಾಡವಿದೆ ಎಂದು ಆರೋಪ ಮಾಡಿದ್ದ ಮಾಜಿ ಸಿಎಂ ಹೆಚ್ಡಿಕೆಗೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15 ಕ್ಷೇತ್ರಗಳ ಉಪ ಚುನಾವಣೆಗೆ ಸುಪ್ರೀಂಕೋರ್ಟ್ ಇಂದು ತಡೆಯಾಜ್ಞೆ ಕೊಟ್ಟಿದ್ದು, ಇದನ್ನು ನಾವು ಸ್ವಾಗತಿಸುತ್ತೇವೆ ಎಂದರು. ಜೊತೆಗೆ ಉಪ ಚುನಾವಣೆ ಸಂಬಂಧ ಬೆಂಗಳೂರು ಹಾಗು ಹುಬ್ಬಳ್ಳಿಯಲ್ಲಿ ಸಭೆ ನಿಗದಿಯಾಗಿದ್ದು, ಚುನಾವಣೆ ಮುಂದೂಡಿಕೆಯಾಗಿದ್ದರೂ ಸಹ ನಾವು ಬಾಕಿ ಇರುವ ಸಂಘಟನಾತ್ಮಕ ಕೆಲಸಗಳನ್ನು ಮುಂದುವರಿಸುತ್ತೇವೆಂದು ಸ್ಪಷ್ಟಪಡಿಸಿದರು.