ಲಾಕ್‌ಡೌನ್ ಇದ್ರೂ ಹೊರ ಬಂದವರನ್ನ ಅಟ್ಟಾಡಿಸಿದ ಪೊಲೀಸರು! - ಮೈಸೂರು ಕೊರೊನಾ ಪ್ರಕರಣಗಳು
🎬 Watch Now: Feature Video

ಕೊರೊನಾ ಹಿನ್ನೆಲೆ ಲಾಕ್‌ಡೌನ್ ಉಲ್ಲಂಘಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿ ತಿರುಗಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ನಡೆದಿದೆ. 144 ಸೆಕ್ಷನ್ ಉಲ್ಲಂಘಿಸಿ ತೆರೆಯಲಾಗಿದ್ದ ಅಂಗಡಿಗಳನ್ನ ಮುಚ್ಚಿಸಲಾಯ್ತು. ಗುಂಪು ಗುಂಪಾಗಿ ಕುಳಿತು ಮಾತುಕತೆ ನಡೆಸುತ್ತಿದ್ದ ವ್ಯಕ್ತಿಗಳ ಮೇಲೂ ಪೊಲೀಸರು ಲಾಠಿಚಾರ್ಜ್ ಮಾಡಿದರು. ಆಟೋಗಳಲ್ಲಿ ಜನರನ್ನು ತುಂಬಿಕೊಂಡು ಹೋಗುತ್ತಿದ್ದ ವ್ಯಕ್ತಿಗೂ ಸಹ ಲಾಠಿ ಏಟು ಬಿತ್ತು.