ಅಭಿವೃದ್ಧಿಯ ಹರಿಕಾರ ಅಗಲಿಕೆಗೆ ಕಂಬನಿ ಮಿಡಿದ ಮುರುಡೇಶ್ವರ ಜನತೆ! - ಮುರುಡೇಶ್ವರ
🎬 Watch Now: Feature Video
ಕಾರವಾರ: ಒಂದು ಕಾಲದಲ್ಲಿ ಅದು ಸಮುದ್ರ ತೀರದ ಪುಟ್ಟ ಗ್ರಾಮ. ಪರಶಿವನ ಆತ್ಮಲಿಂಗವಿದ್ದ ಆ ಗ್ರಾಮ ಸುಮಾರು ಐದಾರು ದಶಕಗಳ ಹಿಂದೆ ಓರ್ವ ಭಕ್ತನ ಅಭಿವೃದ್ಧಿಪರ ಅಭಿಲಾಷೆಯಿಂದಾಗಿ ಇಂದು ವಿಶ್ವದ ಭೂಪಟದಲ್ಲಿ ಗುರುತಿಸಿಕೊಂಡಿದ್ದು, ಪ್ರತಿನಿತ್ಯ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ ಇಂತಹ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಇಹಲೋಕ ತ್ಯಜಿಸಿದ್ದು, ಅವರು ಕಟ್ಟಿ ಬೆಳಸಿದ ಕ್ಷೇತ್ರ ಅವರಿಲ್ಲದೆ ಸಂಪೂರ್ಣ ಸ್ತಬ್ಧವಾಗಿದೆ.