6 ಕೋಟಿ ರೂ. ಮೌಲ್ಯದ ನಿವೇಶನ, ಶೆಡ್ ವಶಪಡಿಸಿಕೊಂಡ ಮುಡಾ - ಮೂಡಾ ಸುದ್ದಿ
🎬 Watch Now: Feature Video

ಮೈಸೂರು: ಅಕ್ರಮ ನಿವೇಶನಗಳು ಹಾಗೂ ಶೆಡ್ಗಳ ಮೇಲೆ ನಿರಂತರ ದಾಳಿ ನಡೆಸಲು ಮುಂದಾಗಿರುವ ಮುಡಾ, 6 ಕೋಟಿ ರೂ. ಮೌಲ್ಯದ ನಿವೇಶನ ವಶಪಡಿಸಿಕೊಂಡಿದೆ. ಮೈಸೂರಿನ ದೇವನೂರು 1ನೇ ಹಂತ ಬಡಾವಣೆ ಆಶಾಮಂದಿರ ಯೋಜನೆಯಡಿ ನಿರ್ಮಾಣವಾದ ಬಡಾವಣೆಯ ಮೂಲೆ ನಿವೇಶನಗಳಾದ ಸಂಖ್ಯೆ 1142, 1162, 1699, 1728, 1727(40x60 ಅಳತೆಯ 4 ನಿವೇಶನ, 30x40 ಅಳತೆಯ 2 ನಿವೇಶನ) ಸುಮಾರು 6 ಕೋಟಿ ರೂ. ಮೌಲ್ಯದ ಈ ಮೂಲೆ ನಿವೇಶನ ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.