ಡಿಕೆಶಿ ಸಿಡಿ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ: ಎಂಟಿಬಿ ಹೇಳಿಕೆ - ಡಿ.ಕೆ ಶಿವಕುಮಾರ್ ಸುದ್ದಿ
🎬 Watch Now: Feature Video
ಬಾಗಲಕೋಟೆ: ಡಿ.ಕೆ ಶಿವಕುಮಾರ್ ಬಳಿ ಸಿಡಿ ಇದ್ದಲ್ಲಿ ಯಾವಾಗಲೂ ಬಿಡುಗಡೆ ಮಾಡುತ್ತಿದ್ದರು. ಆದರೆ, ರಾಜಕೀಯವಾಗಿ ಬಳಸಿಕೊಳ್ಳಲು ಈ ರೀತಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಪಕ್ಷಕ್ಕೆ ಬಂದು ಅಧಿಕಾರ ಸಿಗುವಂತೆ ಮಾಡಿದ್ದೇವೆ. ಎಂಎಲ್ಸಿ ಆಗಿ ಐದು ತಿಂಗಳು ಕಳೆದರೂ, ಸಚಿವ ಸ್ಥಾನ ಸಿಕ್ಕಿಲ್ಲ. ಅದಕ್ಕೆ ಸಭೆ ನಡೆಸಿ, ಮುಖ್ಯಮಂತ್ರಿಗಳಿಗೆ ಒತ್ತಡ ತರುವ ಬಗ್ಗೆ ಚರ್ಚೆ ನಡೆಸಿದ್ದೇವೆ.
ಮುಂದಿನ ಅವಧಿಯವರೆಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಲಿದ್ದಾರೆ. ಕುರುಬರ ಸಮಾಜ ಎಸ್ಟಿ ಮೀಸಲಾತಿ ಸಿಗುವಂತೆ, ನಮ್ಮ ಸಮಾಜಕ್ಕೆ ಅಭಿವೃದ್ಧಿ ನಿಗಮ ಮಾಡುವಂತೆ ಮತ್ತು ಸಮಾಜದ ಮೂರು ಜನ ವಿಧಾನಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡುವಂತೆ ಸ್ಚಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದರು.