ಮಹಿಳೆಯ ಮೇಲಿನ ದೌರ್ಜನ್ಯ ತಡೆಗೆ ಗಟ್ಟಿ ನಿರ್ಧಾರ ಅಗತ್ಯ: ಟಿ.ಹೆಚ್.ಎಂ.ವೀಣಾ - THM Veena's statement on the need for a firmer decision on women's violence prevention
🎬 Watch Now: Feature Video
ಬಳ್ಳಾರಿ: ಮಹಿಳೆಯರ ಮೇಲೆ ಪದೇ ಪದೇ ನಡೆಯುವ ದೌರ್ಜನ್ಯಗಳ ತಡೆಗೆ ಸರ್ಕಾರದಿಂದ ಗಟ್ಟಿ ನಿರ್ಧಾರಗಳ ಅಗತ್ಯವಿದೆ ಎಂದು ಏಷಿಯನ್ ಮಿಸೆಸ್ ಇಂಡಿಯಾ ರನ್ನರ್ ಅಪ್ ಪ್ರಶಸ್ತಿ ವಿಜೇತೆ ಟಿ.ಹೆಚ್.ಎಂ.ವೀಣಾ ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ನಿರ್ಭಯಾ ಪ್ರಕರಣದಲ್ಲಿ ಇದುವರೆಗೂ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳಲು ಆಗಿಲ್ಲ ಯಾಕೆ? ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಕಠಿಣ ನಿರ್ಧಾರಗಳನ್ನು ಸರ್ಕಾರಗಳು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.