ಜನರ ದಾಹ ನೀಗಿಸಲು ಮುಂದಾದ ಶಾಸಕ ಸುಬ್ಬರೆಡ್ಡಿ... ಉಚಿತವಾಗಿ ಮಸಾಲ ಮಜ್ಜಿಗೆ ವಿತರಣೆ - MLA Subbareddy
🎬 Watch Now: Feature Video

ಚಿಕ್ಕಬಳ್ಳಾಪುರ: ಏರುತ್ತಿರುವ ಬಿಸಿಲಿನ ಝಳಕ್ಕೆ ಕುಡಿಯುವ ನೀರು ಸಿಗುವುದೇ ಕಷ್ಟ. ಇಂತಹ ಸಂದರ್ಭದಲ್ಲಿ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಹೋಬಳಿಯ ಜನರಿಗೆ ಉಚಿತವಾಗಿ 2 ತಿಂಗಳು ಕುಡಿಯುವ ನೀರು ಮತ್ತು ಮಸಾಲ ಮಜ್ಜಿಗೆ ವಿತರಿಸಲು ಶಾಸಕ ಸುಬ್ಬರೆಡ್ಡಿ ಮುಂದಾಗಿದ್ದಾರೆ. ಉಚಿತವಾಗಿ ಮಜ್ಜಿಗೆ ವಿತರಿಸುವ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಸಾಮಾನ್ಯವಾಗಿ ಬೇಸಿಗೆಯ ದಿನಗಳಲ್ಲಿ ಈ ಗಡಿ ನಾಡಿನ ಜನರಿಗೆ ಬಿಸಿಲಿನ ತಾಪ ಹೆಚ್ಚು. ಹೋಬಳಿಯ ಸುತ್ತಮುತ್ತ ಇರುವ ಜನರಿಗೆ ಮಜ್ಜಿಗೆ ಜೊತೆಗೆ ನೀರು ವಿತರಿಸಲಾಗುತ್ತದೆ ಎಂದು ತಿಳಿಸಿದರು.