ರಾಜಕೀಯ ಜಂಜಾಟದ ನಡುವೆಯೂ ಮೌಢ್ಯದ ವಿರುದ್ಧ ಸತೀಶ್ ಜಾರಕಿಹೊಳಿ ಹೋರಾಟ! - ಮೂಢನಂಬಿಕೆ ವಿರುದ್ಧ ಜಾಗೃತಿ
🎬 Watch Now: Feature Video
ಬೆಳಗಾವಿ: ಸ್ಮಶಾನ ಎಂದರೆ ದೆವ್ವ, ಪಿಶಾಚಿ, ಅಂತರಾತ್ಮ ವಾಸಿಸುವ ಜಾಗವೆಂಬ ಕಪೋಲಕಲ್ಪಿತ ಕಥೆಗಳೆಲ್ಲಾ ಥಟ್ ಅಂತ ಕಣ್ಮುಂದೆ ಹಾದು ಹೋಗುತ್ತವೆ. 21ನೇ ಶತಮಾನದಲ್ಲೂ ಸಮಾಜದಲ್ಲಿನ ಮೂಢನಂಬಿಕೆಗಳನ್ನು ಜನಮಾನಸದಲ್ಲಿ ಬಿತ್ತುವ, ಬೆಳೆಸುವುದು ನಮ್ಮಲ್ಲಿ ಕೊರತೆ ಇಲ್ಲ. ಇವೆಲ್ಲಾ ಸುಳ್ಳು ಅನ್ನೋದು ಗೊತ್ತಿದ್ರೂ ಜನರಲ್ಲಿ ಅಂಜಿಕೆ ಮಾತ್ರ ತಪ್ಪಿಲ್ಲ. ಈ ನಡುವೆ, ಸ್ಮಶಾನದಲ್ಲೇ ಮಗುವಿಗೆ ನಾಮಕರಣ ಮಾಡುವ ಮೂಲಕ ಮೌಢ್ಯಕ್ಕೆ ಸೆಡ್ಡು ಹೊಡೆಯುವ ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮ ಸಾಕ್ಷಿಯಾಯಿತು. ಇಂಥದ್ದೊಂದು ವಿಶೇಷ ಮತ್ತು ಕುತೂಹಲಕಾರಿ ಕಾರ್ಯಕ್ರಮ ಮಾಡಿದ್ದು ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ.