ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್, ಗೌರವಧನ ವಿತರಿಸಿದ ಶಾಸಕ ಡಾ.ವೈ.ಭರತ್ ಶೆಟ್ಟಿ - ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ
🎬 Watch Now: Feature Video
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ದಿನನಿತ್ಯ ಅಗತ್ಯ ದಿನಸಿ ಆಹಾರ ಕಿಟ್ ವಿತರಿಸಿದರು. ಆಶಾ ಕಾರ್ಯಕರ್ತೆಯರು ಯಾವುದೇ ಪ್ರತಿಫಲದ ನಿರೀಕ್ಷೆ ಇಲ್ಲದೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾ ಕೋವಿಡ್ -19 ವೈರಸ್ನ ಕುರಿತು ಜನರಿಗೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಅವರ ಸೇವೆಗೆ ನಮ್ಮಿಂದಾದ ಸಣ್ಣ ಸಹಾಯವನ್ನು ನೀಡುತ್ತಿದ್ದೇವೆಯೇ ವಿನಃ ಅವರ ಸೇವೆಗೆ ಎಂದೂ ಬೆಲೆಕಟ್ಟಲಾಗದು ಎಂದು ನುಡಿದರು. ಈ ಸಂದರ್ಭದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಉಪಮೇಯರ್ ವೇದಾವತಿ ಕುಳಾಯಿ, ಮನಪಾ ಸದಸ್ಯರಾದ ಲೋಕೇಶ್ ಬೊಳ್ಳಾಜೆ, ವರುಣ್ ಚೌಟ, ರಾಜೇಶ್ ಕೊಟ್ಟಾರಿ, ಮಂಡಲ ಪ್ರಮುಖರಾದ ವಿಠಲ್ ಸಾಲ್ಯಾನ್, ಕಾಟಿಪಳ್ಳ, ಕುಳಾಯಿ, ಸುರತ್ಕಲ್ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.