ಸುಧಾಕರ್ ಹೇಳಿಕೆ ಮಹಾತಪ್ಪು, ಕ್ಷಮೆಯಾಚಿಸಬೇಕು: ಶಾಸಕ ಬಯ್ಯಾಪೂರ - ಸುಧಾಕರ್ ಹೇಳಿಕೆ ಮಹಾತಪ್ಪು
🎬 Watch Now: Feature Video
ಕುಷ್ಟಗಿ (ಕೊಪ್ಪಳ): ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನಿನ್ನೆ 224 ಶಾಸಕರ ಬಗ್ಗೆ ಹೇಳಿಕೆ ನೀಡಿರುವುದು ಅತ್ಯಂತ ಅವಮಾನಕಾರ ಹೇಳಿಕೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು. ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಅತ್ಯಂತ ಬುದ್ಧಿಜೀವಿಯಾಗಿರುವ ಸುಧಾಕರ್ಗೆ ಈ ರೀತಿ ಹೇಳಿಕೆ ನೀಡುವ ಮನೋಭಾವ ಯಾಕೆ ಬಂತು ಗೊತ್ತಿಲ್ಲ. ಈ ವಿವಾದಾತ್ಮಕ ಹೇಳಿಕೆ ಮಹಾತಪ್ಪು. ಹೀಗಾಗಿ, ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದರು. ಇನ್ನು, ಮಸ್ಕಿ ಉಪಚುನಾವಣಾ ಉಸ್ತುವಾರಿಯನ್ನು ಮಾಜಿ ಸಂಸದ ಧ್ರುವ ನಾರಾಯಣ್ ವಹಿಸಿಕೊಂಡಿದ್ದಾರೆ. ಚುನಾವಣೆ ಬಗ್ಗೆ ಇಂದು ಸಂಜೆ ಸಭೆ ನಡೆಸಿ, ಮಾ.26ರಿಂದ ಬಹಿರಂಗ ಪ್ರಚಾರ ಮಾಡಲಿದ್ದೇವೆ ಎಂದರು.