ಕೆ.ಆರ್.ಮಾರುಕಟ್ಟೆಯಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ: ಗ್ರಾಹಕರಿಲ್ಲದೆ ಮನೆ ಕಡೆ ಹೊರಟ ವ್ಯಾಪಾರಿಗಳು - ಕೆ.ಆರ್ ಮಾರುಕಟ್ಟೆಯಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ
🎬 Watch Now: Feature Video
ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್ಗೆ ನಗರದ ಕೆ.ಆರ್.ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನ ಸುತ್ತಮುತ್ತಲಿಂದ ವ್ಯಾಪಾರಿಗಳು ಬೆಳ್ಳಂಬೆಳಗ್ಗೆ ಬಂದು ಹೂವು, ತರಕಾರಿ ವ್ಯಾಪಾರ ಆರಂಭಿಸಿದ್ದರು. ಆದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಾರದ ಕಾರಣ ಫುಟ್ಪಾತ್ ವ್ಯಾಪಾರಿಗಳು ಮನೆ ಕಡೆ ಹೊರಟರು. ಮಳಿಗೆಗಳ ಕೆಲ ಅಂಗಡಿಗಳು ಮಾತ್ರ ತೆರೆದಿದ್ದು, ಕೆಲವು ಇನ್ನೂ ತೆರೆದಿಲ್ಲ. ಗ್ರಾಹಕರನ್ನು ನೋಡಿಕೊಂಡು ವ್ಯಾಪಾರ ಆರಂಭಿಸಲು ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ ಕೆ.ಆರ್. ಮಾರುಕಟ್ಟೆ ಸಂಪೂರ್ಣ ಸ್ತಬ್ಧವಾಗಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ನೊಂದಿಗೆ ಬೆರಳೆಣಿಕೆಯಷ್ಟು ವ್ಯಾಪಾರ ವಹಿವಾಟು ಮುಂದುವರೆದಿದೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.