ಕಿಡಿಗೇಡಿಗಳಿಂದ ರಾಗಿ ಬಣವೆಗಳಿಗೆ ಬೆಂಕಿ... 8 ಲಕ್ಷ ಮೌಲ್ಯದ ಹುಲ್ಲು ಭಸ್ಮ - bangalore rural news
🎬 Watch Now: Feature Video
ದೊಡ್ಡಬಳ್ಳಾಪುರ ತಾಲೂಕಿನ ಓಬದೇನಹಳ್ಳಿಯಲ್ಲಿ ಮಧ್ಯರಾತ್ರಿ ಎಂಟು ಜನರ ರಾಗಿ ಹುಲ್ಲಿನ ಬಣವೆಗಳಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು, ಹುಲ್ಲಿನ ಬಣವೆ ಸುಟ್ಟು ಬೂದಿಯಾಗಿದೆ. ಗ್ರಾಮಸ್ಥರು ನೀರು ಹಾಕಿ ಬೆಂಕಿ ನಂದಿಸಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಅಗ್ನಿಶಾಮಕ ದಳ ಬರುವಷ್ಟರಲ್ಲಿ ಬಣವೆಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು. ಸುಮಾರು 8 ಲಕ್ಷ ಮೌಲ್ಯದ ಹುಲ್ಲು ಬೆಂಕಿಗಾಹುತಿಯಾಗಿದೆ. ಜಾನುವಾರುಗಳ ಮೇವಿಗೆ ಬೆಂಕಿ ಇಟ್ಟ ಕಿಡಿಗೇಡಿಗಳ ಮೇಲೆ ಗ್ರಾಮಸ್ಥರು ಹಿಡಿ ಶಾಪ ಹಾಕಿದ್ದಾರೆ. ಈ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.