ಸಿದ್ದಗಂಗಾ ಶ್ರೀಗಳನ್ನು ನೆನೆದು ಭಾವುಕರಾದ ಸಚಿವ ವಿ.ಸೋಮಣ್ಣ - ಸಚಿವ ವಿ ಸೋಮಣ್ಣ ಕೊಪ್ಪಳ ಭೇಟಿ
🎬 Watch Now: Feature Video
ಕೊಪ್ಪಳ: ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳನ್ನು ನೆನೆದು ಕೊಪ್ಪಳದಲ್ಲಿ ಸಚಿವ ವಿ. ಸೋಮಣ್ಣ ಭಾವುಕರಾದರು. ನಿನ್ನೆ ಕೊಪ್ಪಳಕ್ಕೆ ಆಗಮಿಸಿದ್ದ ಅವರು ಕೊಪ್ಪಳದ ಶ್ರೀ ಗವಿಮಠಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಮುಂದೆ ಸಿದ್ದಗಂಗಾ ಶ್ರೀಗಳನ್ನು ಹಾಗೂ ಅವರ ಕಾರ್ಯಗಳನ್ನು ನೆನೆದು ಭಾವುಕರಾದರು. ಶ್ರೀಗಳು ಸೋಮಣ್ಣ ಅವರನ್ನು ಸಂತೈಸಿ ಆಶೀರ್ವದಿಸಿದರು.