ಸಿಡಿ ಇದ್ದರೆ ಬಿಡುಗಡೆ ಮಾಡಲಿ, ಇದು ಬೆದರಿಕೆ ತಂತ್ರ:ಸಚಿವ ಪ್ರಹ್ಲಾದ್ ಜೋಶಿ - ಹುಬ್ಬಳ್ಳಿ ಸುದ್ದಿ
🎬 Watch Now: Feature Video
ಹುಬ್ಬಳ್ಳಿ: ರಾಜಕಾರಣದಲ್ಲಿ ಆಸೆ ಇರುವುದು ತಪ್ಪಲ್ಲ. ಆದ್ರೆ ಬಹಿರಂಗ ಹೇಳಿಕೆ ನೀಡುವುದು ಸರಿಯಾದ ಕ್ರಮವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಶಾಸಕರ ಅಸಮಾಧಾನವನ್ನು ಮುಖ್ಯಮಂತ್ರಿಗಳು ಬಗೆಹರಿಸುತ್ತಾರೆ. ಆದ್ರೆ ಸಿಡಿ ಇದೆ ಅಂತ ಹೆದರಿಸಿವುದು ಸರಿಯಲ್ಲ. ಸಿಎಂ ಅವರೇ ಹೇಳಿದ್ದಾರೆ ಸಿಡಿ ಇದ್ರೆ ಕೊಡಿ ಅಂತ. ಅವರ ಬಳಿ ಸಿಡಿ ಇಲ್ಲ. ಸುಮ್ನೆ ಹೆದರಿಸುತ್ತಿದ್ದಾರೆ. ಇದ್ದರೆ ಬಿಡುಗಡೆ ಮಾಡಲಿ, ಇದು ಕೇವಲ ಹೆದರಿಸುವ ತಂತ್ರ. ನನ್ನ ಬಳಿ ಸಿಡಿ ಬಂದಿಲ್ಲ. ಬಂದ್ರೆ ನಾನು ಮೊದಲೇ ನಿಮಗೆ ಕೊಡುತ್ತೇನೆ ಎಂದು ನಗೆ ಚಟಾಕಿ ಹಾರಿಸಿದರು.