ತುಂಬಿ ಹರಿಯುತ್ತಿರುವ ಉಡುಪಿಯ ಜೀವನದಿ ಸ್ವರ್ಣ; ಪತ್ನಿಸಮೇತ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಾಗಿನ ಅರ್ಪಣೆ - ಬಾಗಿನ ಅರ್ಪಣೆ
🎬 Watch Now: Feature Video
ಉಡುಪಿ ಜಿಲ್ಲೆಯ ನಗರ ಪ್ರದೇಶಕ್ಕೆ ನೀರುಣಿಸುವ ನದಿ ಸ್ವರ್ಣೆ. ಜಿಲ್ಲೆಯಲ್ಲಿ ಸುರಿದ ಅಬ್ಬರದ ಮಳೆಯಿಂದಾಗಿ ಸ್ವರ್ಣೆ ತುಂಬಿ ಹರಿಯುತ್ತಿದ್ದಾಳೆ. ನದಿ ತುಂಬಿದಾಗಲೆಲ್ಲ ಬಾಗಿನ ಅರ್ಪಿಸುವ ಮೂಲಕ ಗೌರವ ಸಲ್ಲಿಸುವುದು ವಾಡಿಕೆ. ಅದರಂತೆ ಶೀಂಬ್ರಾ ಸ್ನಾನ ಘಟ್ಟದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪತ್ನಿ ಸಮೇತರಾಗಿ ಮಹಾಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಬಳಿಕ ಸ್ವರ್ಣೆಗೆ ನಮಿಸಿ ಬಾಗಿನ ಅರ್ಪಿಸಿದ್ರು.