ಸೈಕಲ್ ಏರಿ ಚಿಕ್ಕಮಗಳೂರಲ್ಲಿ ಪರಿಸ್ಥಿತಿ ಅವಲೋಕಿಸಿದ್ರು ಸಚಿವ ಸಿ.ಟಿ. ರವಿ - Minister CT Ravi
🎬 Watch Now: Feature Video

ಚಿಕ್ಕಮಗಳೂರು: ಕೊರೊನಾ ಭೀತಿ ಆವರಿಸಿರುವ ಹಿನ್ನಲೆ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ರೌಂಡ್ಸ್ ಹಾಕಿದ್ದಾರೆ. ಏಕಾಂಗಿ ಆಗಿ ಸೈಕಲ್ ಏರಿ ನಗರದ ಪರಿಸ್ಥಿತಿ ಅವಲೋಕಿಸಿದ್ರು. ಈ ವೇಳೆ ಭಾರತ ಲಾಕ್ಡೌನ್ಗೆ ಜನರ ಸ್ಪಂದನೆ ಹೇಗಿದೆ ಎಂಬುದನ್ನು ಖುದ್ದಾಗಿ ವೀಕ್ಷಣೆ ಮಾಡಿದರು. ಇಂದು ನಗರದ ಎಂ ಜಿ ರಸ್ತೆ, ಐಜಿ ರಸ್ತೆ, ಆಜಾದ್ ವೃತ್ತದಲ್ಲಿ ಪರಿಶೀಲನೆ ನಡೆಸಿದ್ದಾರೆ. ನಂತರ ಸೈಕಲ್ ನಿಲ್ಲಿಸಿ ಪೊಲೀಸರ ಬಳಿ ಕೆಲಹೊತ್ತು ಚರ್ಚಿಸಿ ಮಾಹಿತಿ ಪಡೆದಿದ್ದಾರೆ.