ಇವರನ್ನೇ ಎಂಎಲ್ಸಿ ಮಾಡುವಂತೆ ಮನವಿ ಮಾಡಿದ್ದೇವೆ: ಎಲ್ಲಾ ಸಿಎಂ ಕೈಯಲ್ಲಿದೆ ಎಂದ ಭೈರತಿ ಬಸವರಾಜ್ - Byrathi Basavaraj reaction about MLC ticket
🎬 Watch Now: Feature Video
ಚಿತ್ರದುರ್ಗ: ರಾಷ್ಟ್ರೀಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನಮ್ಮ ನಾಯಕರು. ಅವರ ಮಾತು ಬಿಜೆಪಿಯಲ್ಲಿ ನಡೆಯುತ್ತದೆ. ಕರ್ನಾಟಕದಲ್ಲಿ ಮೈತ್ರಿ ಮುರಿದು ಬಿಜೆಪಿ ಸರ್ಕಾರ ಬರಲು ಯಾರು ಕಾರಣರು ಎಂಬುದು ಸಿಎಂ ಅವರ ಗಮನದಲ್ಲಿದೆ ಎಂದು ಸಚಿವ ಭೈರತಿ ಬಸವರಾಜ ಬಿ.ಎಲ್.ಸಂತೋಷ್ ಪರ ಬ್ಯಾಟ್ ಬೀಸಿದರು. ಎಂಎಲ್ಸಿ ಸ್ಥಾನಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೆಲವೇ ದಿನಗಳಲ್ಲಿ ಕೋರ್ ಕಮಿಟಿ ಸಭೆ ನಡೆಯಲ್ಲಿದೆ. ಈ ಬಗ್ಗೆ ನಿರ್ಧಾರವಾಗಲಿದೆ. ರೋಷನ್ ಬೇಗ್, ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್, ಶಂಕರ್ ಅವರಿಗೆ ಸ್ಥಾನ ನೀಡುವಂತೆ ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದೇವೆ. ಕೊಡುವುದು, ಬಿಡುವುದು ಸಿಎಂ ಅವರ ವಿವೇಚನೆಗೆ ಬಿಟ್ಟಿದ್ದು. ಅದರ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದರು.