ಮಹಾರಾಷ್ಟ್ರಕ್ಕೆ ಗುಳೆ ಹೋದ ಕಾರ್ಮಿಕರು ಕಾಲ್ನಡಿಗೆ ಮೂಲಕ ಗ್ರಾಮದ ಕಡೆ ಪಯಣ - ಮಹಾರಾಷ್ಟ್ರದ ಗುಳೆ ಕಾರ್ಮಿಕರು
🎬 Watch Now: Feature Video
ಮಹಾರಾಷ್ಟ್ರಕ್ಕೆ ದುಡಿಯಲು ಗುಳೆ ಹೋದ ಕನ್ನಡಿಗರು ತಮ್ಮ ಗ್ರಾಮಕ್ಕೆ ಮರಳಲು ವಾಹನ ವ್ಯವಸ್ಥೆ ಇಲ್ಲದ ಕಾರಣ ಕಾಲ್ನಡಿಗೆ ಮೂಲಕ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಯುವಕರು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಗೆ ಪೇಟಿಂಗ್ ಕೆಲಸಕ್ಕೆ ಹೋಗಿದ್ದರು. ಈಗ ದೇಶ ಲಾಕ್ಡೌನ್ ಆದ ಹಿನ್ನೆಲೆ ಊಟದ ವ್ಯವಸ್ಥೆ ಹಾಗೂ ಕೈ ಯಲ್ಲಿ ಕೆಲಸವಿಲ್ಲ. ಮರಳಿ ತಮ್ಮ ಗ್ರಾಮಕ್ಕೆ ಹೋಗಬೇಕೆಂದರೆ ಸಾರಿಗೆ ವ್ಯವಸ್ಥೆ ಕೂಡ ಇಲ್ಲ. ಹೀಗಾಗಿ ಕಾಲ್ನಡಿಗೆ ಮೂಲಕ ಸ್ವಂತ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ.