ಎಸ್.ಟಿ.ಸೋಮಶೇಖರ್ ಗೆಲುವು ನನ್ನ ಗೆಲುವೆಂದು ಭಾವಿಸುತ್ತೇನೆ: ಮುನಿರತ್ನಂ - ಅನರ್ಹ ಶಾಸಕ ಮುನಿರತ್ನಂ ಲೆಟೆಸ್ಟ್ ನ್ಯೂಸ್
🎬 Watch Now: Feature Video
ಬೆಂಗಳೂರು: ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಗೆಲುವಿನ ಸಂಭ್ರಮದಲ್ಲಿ ರಾಜರಾಜೇಶ್ವರಿ ನಗರ ಅನರ್ಹ ಶಾಸಕ ಮುನಿರತ್ನ ಪಾಲ್ಗೊಂಡರು. ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ತಮ್ಮ ಸ್ನೇಹಿತನ ಗೆಲುವಿಗೆ ಹರ್ಷ ವ್ಯಕ್ತಪಡಿಸಿದರು. ಈ ವೇಳೆ, ಈಟಿವಿ ಭಾರತ್ನೊಂದಿಗೆ ಮಾತನಾಡಿದ ಅವರು, ನನ್ನ ಸ್ನೇಹಿತರೂ ಆಪ್ತರಾದ ಎಸ್.ಟಿ.ಸೋಮಶೇಖರ್ ಅವರು ಗೆದ್ದಿರುವುದು ನನಗೆ ಸಂತಸ ತಂದಿದೆ. ಅವರ ಗೆಲುವನ್ನು ನಾನು ನನ್ನ ಗೆಲುವೆಂದು ಭಾವಿಸುತ್ತೇನೆ. ಅವರಿಗೆ ಒಳ್ಳೆಯದಾಗಬೇಕು. ಮುಂದಿನ ದಿನಗಳಲ್ಲಿ ಉತ್ತಮ ಹುದ್ದೆ ಪಡೆಯಬೇಕು ಎಂಬುದು ನನ್ನ ಆಶಯ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.