ಮಂಗಳೂರು ದಸರಾಕ್ಕೆ ಅದ್ದೂರಿ ತೆರೆ, ನವದುರ್ಗೆಯರ ವೈಭವದ ಮೆರವಣಿಗೆ - Manglore navaratri celebration news
🎬 Watch Now: Feature Video

ಮಂಗಳೂರು: ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ಕಳೆದ ಹತ್ತು ದಿನಗಳಿಂದ ವೈಭವದಿಂದ ನಡೆಯುತ್ತಿದ್ದ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವಕ್ಕೆ ಅದ್ಧೂರಿ ತೆರೆ ಎಳೆಯಲಾಯಿತು. ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಿದೆ. ಈ ಮೆರವಣಿಗೆಗೆ ಬೃಹತ್ ಗಾತ್ರದ ನೂರಾರು ಕೊಡೆಗಳು, ಜಾನಪದ ಕಲಾ ತಂಡಗಳು, ಹುಲಿವೇಷ, ಐತಿಹಾಸಿಕ, ಪೌರಾಣಿಕ ಕಲ್ಪನೆಗಳನ್ನು ಬಿಂಬಿಸುವ ವಿಭಿನ್ನ ಸ್ತಬ್ಧಚಿತ್ರಗಳು ಮೆರಗು ನೀಡಿವೆ.