ಕರಾವಳಿಯಲ್ಲಿ ಹೆಚ್ಚಿದ ಕೊರೊನಾ ಭೀತಿ: ಮಂಗಳೂರು ಸಂಪೂರ್ಣ ಸ್ತಬ್ಧ - ಮಂಗಳೂರು ಸಂಪೂರ್ಣ ಸ್ತಬ್ಧ
🎬 Watch Now: Feature Video
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಲಾಕ್ ಡೌನ್ಅನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಕಳೆದ ಮೂರು ದಿನಗಳಿಂದ ಸಂಪೂರ್ಣ ಬಂದ್ ನಡೆಯುತ್ತಿದೆ. ಹೀಗಾಗಿ ಸದಾ ವಾಹನ, ಜನ ಸಂಚಾರದಿಂದ ಗಿಜಿಗುಡುತ್ತಿದ್ದ ಮಂಗಳೂರು ನಗರ ಈಗ ಸ್ತಬ್ಧವಾಗಿದೆ. ಕಳೆದ ಮೂರು ದಿನಗಳಿಂದ ಹಾಲು, ಮೆಡಿಕಲ್ಸ್ ಮತ್ತು ಪತ್ರಿಕೆಗಳು ಮಾತ್ರ ದೊರೆಯುತ್ತಿವೆ. ದಿನಸಿ ಅಂಗಡಿಗಳು ಬಂದ್ ಆಗಿವೆ. ನಾಳೆ ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆವರೆಗೆ ಮಾತ್ರ ದಿನಸಿ ಅಂಗಡಿಗಳನ್ನು ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿದೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...